Hi

Hi

Thursday, 6 October 2016

ಕಿಡಿಗೇಡಿಗಳಾಗಿದ್ದ ದಿನಗಳು

ನಾನು ಆರನೇ ಕ್ಲಾಸ್ ನಲ್ಲಿ ಓದುತಿದ್ದೆ.ನಮ್ಮ ಮನೆ ಪಕ್ಕದಲ್ಲಿ ಹೊಳೆ ಹರಿಯುತ್ತಿತ್ತು,ಈಜಿ ದಡ ಸೇರಿದರೆ ತಿನ್ನಲು ಬೇಕಾದಷ್ಟು ಕಬ್ಬು,ಹಣ್ಣುಗಳು ಏನೇನೊ ಸಿಗುತ್ತಿದ್ದವು.ಆ ದಿನ ನನ್ನ ಗ್ಯಾಂಗ್ ಬಿಟ್ಟು  ಒಬ್ಬನೆ ಹೊರಟಿದ್ದೆ.ಇರುವುದೊಂದೇ ಡ್ರೆಸ್ ಆದ್ರಿಂದ ಬಟ್ಟೆಯನ್ನೆಲ್ಲಾ ಗುಂಡಾಗಿ ಕಟ್ಟಿ ಮರಕ್ಕೆ ನೇತು ಹಾಕಿ ಆಚೆ ದಡ ಸೇರಿದೆ.ಕಬ್ಬು ಮುರಿಯುದರಲ್ಲಿದ್ದೆ..ಟಕ್ .. ಸೌಂಡಿಗೆ ಬಾರ್ಗೊಲು ಹಿಡಿದು ಬಂದ ಬಾಬಣ್ಣ, ಬರಿ ಮೈಗೆ ಬಾಸುಂಡೆ ಬರಿಸಿ ಬನ್ನೆರಳ ಮರಕ್ಕೆ ಕಟ್ಟಿ ಹಾಕಿದ್ರು. ಸಂಜೆ ಮಾವ ಬರೊ ತನಕ ಬಿಟ್ಟಿರಲಿಲ್ಲಾ. ಕೆಂಪಿರುವೆ ನನ್ನ ಕೆಂಪಗೆ ಮಾಡಿತ್ತು...
ಸಂಜೆ  ಐದಾಗಿದ್ರಿಂದ ಕ್ಲಾಸ್ ಮೇಟ್ ನನ್ನ ನಗ್ನ ಸ್ಥಿತಿ ನೋಡಿ ನಕ್ಕು ಹೋಗಿದ್ರು.ಅವರಲ್ಲಿ ಹುಡುಗಿಯರೇ ಜಾಸ್ತಿ ಅಬ್ಬಾ ಎಂತಹ ಅವಮಾನ...
ಅದ್ಯಾಕೊ ಅವರಲ್ಲಿ ತುಂಬ ಹಣವಿತ್ತು.ಇರೋದು ಇಬ್ರೆ ಗಂಡ ಹೆಂಡತಿ. ಹೆಂಡ್ತಿಗೆ ಬೇರೆ ಎನೊ ಕಾಯಿಲೆಯಂತೆ ಯಾಕಪ್ಪಾ ಅವರಿಗೆ ಅಷ್ಟೊಂದು ಹಣ...
ಪ್ರತೀಕಾರ ತೋರಿಸಲು ಅದೆಷ‍್ಟೊ ಬಾರಿ ಪ್ರಯತ್ನಿಸಿದೆ.ಹಂದಿ ಉರಳು ಅವರಿಗಿಟ್ಟಾಗಲು ಸಿಕ್ಕಿ ಹಾಕಿ ಕೊಂಡಿರಲಿಲ್ಲಾ.ನಡೆವ ದಾರಿಯಲ್ಲಿ ಗುಂಡಿ ತೋಡಿ ತರಗೆಲೆ ಮಚ್ಚಿದೆ,ಅವರು ಗೇರು ಸಸಿ ತಂದು ನೆಟ್ಟರು,ಅದೀಗ ಹೂವು ಬಿಟ್ಟದೆ.
ಒಂದು ದಿನ ಬಾಬಣ್ಣನಿಗೆ ಮದುವೆ ಕರಯೋಲೆ ಪೋಸ್ಟ್  ಮೂಲಕ ಬಂದಿತ್ತು. ನಾನೆ ಓದಿ ವಾರ ಬದಲಾಯಿಸಿ ಅವರಿಗೆ ಕೊಟ್ಟಿದ್ದೆ. ಅವರು ಮದುವೆಗೆ ಹೋಗುವ ವೇಳೆ ಭಯಂಕರ ಸ್ಕೆಚ್  ಹಾಕಿದ್ದೆ.ಸ್ಕೆಚ್ ಹಾಕಲು 40 ಪೇಜ್ ಬುಕ್ ಖಾಲಿಯಾಗಿತ್ತು.
ನನ್ನ ಗ್ಯಾಂಗ್ ಕಟ್ಟಿಕೊಂಡು ಬಾಳೆದಿಂಡಿನ ತೆಪ್ಪದಲ್ಲಿ ಹೊಳೆ ದಾಟಿಸಿದೆ.ಮನೆಯಿಡಿ ದ್ವಂಸ ಮಾಡಿದೆವು,ಇದ್ದ ಪೆಟ್ಟಿಗೆಗಳು,ಹಣ ಎಲ್ಲವನ್ನು ಹೊತ್ತುಕೊಂಡು ಬಂದೆವು.ಬರುವಾಗ ಹೊಳೆ ತನ್ನ ಪಾಲು ದಕ್ಕಿಸಿಕೊಂಡಿತು.    
ಸಂಜೆ ಬಾಬಣ್ಣನ ಹೆಂಡತಿ ಸಿರಿಯಸ್ ಎನ್ನುವ ಸುದ್ದಿ ಇನ್ನಷ್ಟು ಖುಷಿ ಕೊಟ್ಟಿತು.
ಒಂದು ವಾರ ಕಳೆದು ರಾಯಚೂರಿಗೆ ನಮ್ಮ ಮನೆ ಬದಲಾಯಿಸಲಾಗಿತ್ತು.
ಪೆಟ್ಟಿಗೆ ತೆರೆದ ನಾ  ಮಾತ್ರೆ.,ಚೀಟಿ.ಪುಸ್ತಕ ನೋಡಿ ಮೂಲೆಗೆ ಎಸೆದೆ.
ಇಂದು ನಾ ಡಾಕ್ಟರ್  ಆಗಿರೊಕೆ
ಬಾಬಣ್ಣನ ದಿನಚರಿ ಪುಸ್ತಕವೇ ಕಾರಣ.ಕಣ್ಣಿರನ್ನೆ ಅದ್ದಿ ಬರೆದ ಪುಸ್ತಕ ಅದು.ಹೆಂಡತಿಯ ಕ್ಯಾನ್ಸರ್ ಗುಣಪಡಿಸಲು ಅವರು ಪರಿತಪಿಸಿದ ಪರಿ,ಸಂಗ್ರಹಿಸುತ್ತಿದ್ದ ಹಣ,ಮಕ್ಕಳಿಲ್ಲದಿದ್ದರು ಪರವಾಗಿಲ್ಲಾ ಅನ್ನೊ ನೋವು,ಬೇರೆ ಮದುವೆಯಾಗದ ಅವರ ಉದಾತ್ತ ಜೀವನ ಹೀಗೆ ಎಲ್ಲವು ಇಂಚಿಂಚು ದಾಖಲಾಗಿತ್ತು.ಕಣ್ಣಂಚು ತುಂಬಿಬಂತು.ಪಶ್ಚಾತ್ತಾಪ ಪಟ್ಟ ನನಗೆ ಅವರಿಬ್ಬರನ್ನು ಹುಡುಕಿ ಕ್ಷಮೆ ಕೇಳುವುದು ಸಾಧ್ಯವಿಲ್ಲ ಎಂದು ಮನದಟ್ಟಾಯಿತು...

      ಸಂದೇಶ ಪೂಜಾರಿ ಗುಲ್ವಾಡಿ

No comments:

Post a Comment