Hi

Hi

Friday, 7 October 2016

ವ್ಯರ್ಥಛಲ

ವ್ಯರ್ಥಛಲ



ಆತ ಬಹಳ ಮಹತ್ವಾಕಾಂಕ್ಷಿ, ಏನನ್ನಾದರೂ ಸಾಧಿಸಲೇ ಬೇಕೆಂಬ ಮುಂಗೋಪಿ.ಆತ ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಒಮ್ಮೊಮ್ಮೆ ತನ್ನ ಅಂತರ್ಯದ ನಿಜ ರೂಪ ತೋರಿಸುತ್ತಾನೆ.ಒಮ್ಮೊಮ್ಮೆ ನಾನು ಆತನನ್ನು ಸಮರ್ಥಿಸುತ್ತೆನೆ ಮನದೊಳಗೆ ದ್ವೇಷಿಸುತ್ತೆನೆ.
ತಾನು ಗೆದ್ದೆ ಗೆಲ್ಲುವೆ ಎಂಬ ಆತ್ಮವಿಶ್ವಾಸದ ಛಲದಿಂದ ತನ್ನ ಮನದನ್ನೆಗೆ ಮಾತನಿಟ್ಟು ತನ್ನ ಕಾರ್ಯತತ್ಪರತೆಗೆ ಮುಂದಾಗುತ್ತಾನೆ.
ಮುಂದಿನ ಹಾದಿಯಲ್ಲಿ  ಸಾಕಷ್ಟು  ಎಡರು ತೊಡರುಗಳನ್ನು ಅನುಭವಿಸುತ್ತ ಸಾಗುತ್ತಾನೆ. ಅಲ್ಲಿ ಅವನಿಗೆ ಸಹಾಯದ ಒಂದು ಎಳೆ ಹಬ್ಬಿರುದರಿಂದ ತನ್ನ ಜೀವನದಲ್ಲಿ ಅಷ್ಟೇನು ಯೋಚಿಸುವುದಿಲ್ಲ.

ಕಾಲನ ನರ್ತನಕೆ ಮಿತಿ ಉಂಟೆ..?
ಆತ ಆರಿಸಿಕೊಂಡ ವಿಷಯ ಸಧ್ಯಕ್ಕಂತು ಕಠಿಣ.ಅದರೆ ಅವನಿಗೊಂದು ಆತ್ಮವಿಶ್ವಾಸ ತನ್ನಂತೆ ದುಡಿವರಿಗಿಂತ ತಾ ಮುಂದಿದ್ದೆ. 

ಒಂದು ದಿನ,ಆ ದಿನ, ಸುದಿನ,ಶುಭದಿನ. ತನ್ನ ಕನಸುಗಳನ್ನೆಲ್ಲ ತನ್ನ ಸುತ್ತ ಹರಡಿಕೊಂಡು ತಾನೊಬ್ಬನೇ ಮಧ್ಯದಲ್ಲಿದ್ದುಕೊಂಡು ಒಂಟಿಯಾಗಿ ಆ ಪಾತ್ರಗಳಿಗೆ ತನ್ನನ್ನು ಹಚ್ಚುತ್ತಾನೆ,ಕುಣಿಯುತ್ತಾನೆ,ಕುಪ್ಪಳಿಸುತ್ತಾನೆ,ಆನಂದಿಸುತ್ತಾನೆ.

ಸಂಜೆಯ ವೇಳೆ ಆಗುತ್ತಿದ್ದಂತೆ ಭ್ರಮೆಯ ಲೋಕದಿಂದ ಮರಳಿ ಕನಸುಗಳನ್ನೆಲ್ಲ ಕರಗಿಸಿ ಬಳಿಯಲ್ಲಿರುವ ಚಿನ್ನದ ಚೌಕಟ್ಟಿನ. ಕನ್ನಡಿಗರ ಬಣ್ಣವಾಗಿ  ಬಳಿಯುತ್ತಾನೆ.ಅಲ್ಪ ಸಮಯದಲ್ಲೇ ತುಳಿತಕ್ಕೊಳಗಾಗಿ ಗಾಜು ಪುಡಿಗಟ್ಟುವುದು ಎಂಬ ಯೋಚನೆಯೆ ಇಲ್ಲ...

ಅವನು ನನಗನಿಸಿದ ಹಾಗೆ ಯಾವ ದೊಡ್ಡ ತಪ್ಪುಗಳನ್ನು  ಮಾಡಿದವನಲ್ಲ,ಅದರೆ ಅದೇಕೊ.ಆತ ಮಾಡಿದಿಷ್ಟೆ ಪ್ರಥ್ವಿಯಲ್ಲಿ ಒಂದು ದೊಡ್ಡ ಹೆಜ್ಜೆ ಊರಿದ್ದು.
ಜನ ಅವನಿಗೆ ಎದುರಾಡುವುದಿಲ್ಲ ಅವನು ಮಾಡಿದ್ದೆ ಸರಿ ಅನ್ನುವ ರೀತಿ,ಆದ್ದರಿಂದಲೇ  ಅಲ್ಪ ಜಂಭ.
ಯಾವ ವಿಷಯಕ್ಕಾದರು ದುಡುಕಿ ಹೊಂದಾಣಿಕೆ ಮಾಡಿಕೊಳ್ಳದ ಅವನು ತನ್ನ ಆತ್ಮೀಯ ಗೆಳೆಯನಾದರೂ,ಅಲ್ಲಾ ಎಂದುಕೊಂಡೆ ಹೊಂದಿಕೊಂಡಿದ್ದ.
ಅಲ್ಪವಧಿಯಲ್ಲಿ ವಿಶಾಲತೆಯನ್ನು ಸಾಧಿಸ ಹೊರಟ ಅವನ ಮನದಲ್ಲಿ ಯೋಜನೆಯ ಯೋಚನಾಲಹರಿ ಹೆಣೆಯಲ್ಪಟ್ಟಿತು.
ಸದಾ ಅವಳ ಉಸಿರಲ್ಲಿ ಬದುಕುತಿದ್ದ ಅವನಿಗೆ ಸಧ್ಯ ಉಸಿರುಗಟ್ಟಿದಂತಾಗಿದೆ.ಅವನವಳ ಮಧ್ಯದಲ್ಲಿ ಪರಾಕೀಯರ ಪ್ರವೇಶ ಇದಕ್ಕೆಲ್ಲಾ ಕಾರಣವಾಗಿತ್ತು.ಏಕಮುಖ ಒಲವು ಇನ್ನೊಂದು  ಕಾರಣವಾಗಿರಬಹುದು.ಇತ್ತೀಚಿನ ಈ ಪ್ರಕ್ರಿಯೆ ಅವನಲ್ಲಿ ಆಳ ನಿರಾಸೆಯನ್ನುಂಟುಮಾಡಿ ಜಿಗುಪ್ಸೆಗೆ ಒಳದೂಡಿತ್ತು.

ಪ್ರೀತಿಯ ಕುಲುಮೆಯೆಂದು ಎಷ್ಟು ಬೇಯಲು ಸಾಧ್ಯ.? ಮತ್ತೆ ಚೇತರಿಸಿಕೊಂಡ ಅವನಿಗೆ ಸಂಗಾತಿಯೊಬ್ಬಳು ಸಿಕ್ಕಳು. ಖುಷಿಯಲಿ ತನ್ನ ನೋವನ್ನೆಲ್ಲ ಮರೆತ ಜೊತೆಗೆ ಮೂಲವನ್ನೆ ಮರೆತ.
ಇನ್ನುಳಿದಿದ್ದು ಅವಳನ್ನು  ಉಳಿಸಿಕೊಳ್ಳುವ ಛಲ,ಈ ಹಂತದಲ್ಲಿ ಅವನ ಕೋಪ, ಸ್ವಾಭಿಮಾನ,ಗಾಂಭೀರ್ಯವನ್ನೆ ಮರೆತ. 

ಅತ್ತಿತ್ತ ಸುತ್ತಾಡಿ ಎರಡು ಕಡೆಯಿಂದ ಒಂದಷ್ಟು ಅನುಭವ ಗಳಿಸಿಕೊಂಡ.ಜೀವನ ತುಂಬ ಪಾಠ ಕಲಿಸಿತ್ತು.

ಗಾಯದಮೇಲೆ ಬರೆ
ಜೀವನ ಅವನಂದುಕೊಂಡಂತೆ ಇರಲಿಲ್ಲ .ಇಲ್ಲಿ ಕಾಯುವ ತಾಳ್ಮೆ ಯಾರಿಗು ಇರಲಿಲ್ಲ.ತನ್ನ ಬದುಕಿಗಿಂತ ಇತರರ ಬಾಳು ದೊಡ್ಡದೇನಲ್ಲಾ..ತಾನು ತನ್ನನ್ನೇ ಪ್ರೀತಿಸುವುದರಲ್ಲಿ ತಪ್ಪೇನಿಲ್ಲ.
ಎಲ್ಲಾ ಕಳೆದುಕೊಂಡ ಅವನಿಗೆ ಕೊನೆಗೆ  ಪ್ರೀತಿಯು ಮೋಸಮಾಡಿತ್ತು.ಇನ್ನುಳಿದ ಬದುಕಲ್ಲಿ ಮೋಸಗೊಂಡ ಅವನಿಗೆ ಮೋಸಮಾಡುವುದೊಂದೆ ಗುರಿ ಅನ್ನುವ ಹಾಗೆ ಇದ್ದಂತಿತ್ತು.
ಎಲ್ಲರ ಹಿತನುಡಿಗಳು ಅವನಿಗೆ ಕೇಳಿಸದಷ್ಟು ಬೆಳೆದು ನಿಂತ. ನನ್ನವನೆಂಬ ವಾತ್ಸಲ್ಯದಿಂದ ನನ್ನ ಮನ ಕಳವಳಗೊಂಡಿತು.
ಒಳ್ಳೆಯತನದ ಉಳಿವಿಗಾಗಿ ನಾನು ಹೋರಾಡಲೇ ಬೇಕು,ಅವನ ಮನಸ್ಸನ್ನು ಕೊಲ್ಲುವುದು ಅನಿವಾರ್ಯವಾಗಿತ್ತು.ಇದು ಅವನ ಬದುಕನ್ನೆ ನಾಶಮಾಡಿತ್ತು.ಸತ್ತಂತೆ ಬದುಕಿದ್ದ ಆತ.

ಮನುಷ್ಯನಿಗೆ ಸ್ವಾರ್ಥ ಜನ್ಮಸಿದ್ಧ ಹಕ್ಕಿರಬೇಕು,ನನ್ನ ನೆಮ್ಮದಿಗೊಸ್ಕರ ಎಲ್ಲಾ(ಎಲ್ಲರೂ) ಮರೆತ ಆತನ ನಾನು ಮರೆತೆ.
ಲೋಕ ಶಾಂತಗೊಂಡಿದೆ ಆದರೆ ಪ್ರಪಾತ ಹಾಗೇ ಇದೆ.......

------ಸಂದೇಶ ಪೂಜಾರಿ ಗುಲ್ವಾಡಿ

No comments:

Post a Comment