Hi

Hi

Saturday, 8 October 2016

ಹ್ರದಯ-ವಿದಾಯ

ಹ್ರದಯ-ವಿದಾಯ



ಹ್ರದಯ- ವಿದಾಯ ಈ ಜೋಡಿಪದಗಳು ಮೆಲ್ನೋಟಕ್ಕೆ ಪ್ರಾಸವಾಗಿದ್ದರೂ ಇವುಗಳ ನಡುವಿನ ಸಂಬಂಧದ ವೈಖರಿಯೇ  ಬೇರೆ.ಸಾಮನ್ಯರಂತೆ ಇದ್ದವರನ್ನ ಒಂದುಗೂಡಿಸುವ ಕಾರ್ಯ ಹ್ರದಯದ್ದು.ಹ್ರದಯ ಮನದ ಮಿತ್ರ ಹ್ರದಯಕ್ಕೆ ನೋವಾದರೆ ಮನಕ್ಕೆ ನೋವಾದಂತೆ,ಹ್ರದಯಕ್ಕೂ ಹಾಗೆಯೇ ....ವಿದಾಯ ಎಂದರೆ ವಿಂಗಡಿಸಿ ದೂರಮಾಡು ಎಂದರ್ಥ.ವಿದಾಯ ಎನ್ನುವುದು ಒಂದರ್ಥದಲ್ಲಿ ಹ್ರದಯಕ್ಕೆ ಎರಗುವ ಸಿಡಿಲಿದ್ದಂತೆ.ಹ್ರದಯ ಪ್ರೀತಿಗಾಗಿ ಇರೋದು,ನೋವನ್ನು ಹಂಚಿಕೊಳ್ಳಲ್ಲಾ ಆದರೂ ಮಿತ್ರತ್ವದ ಅವಿನಾಭಾವ ಸಂಬಂಧದಿಂದ ಮನ ಕುಗ್ಗುತ್ತದೆ.ಇಂತಹ ಸಂದರ್ಭದಲ್ಲಿ ಮಿತ್ರನ ಚೇತರಿಕೆಗೆ ಹ್ರದಯ ಮುಂದಾಗಬೇಕು,ಮುಂದಾಗುತ್ತದೆ.ಇದೆ ಸ್ನೇಹ....ನಿಮ್ಮ ಮನದಲ್ಲಿ ಒಬ್ಬ ವ್ಯಕ್ತಿ ಸಂತೋಷವಾಗಿರಲು ಏನಿರಬೇಕು ಎಂಬ ಪ್ರಶ್ನೆ ಹುಟ್ಟಿಕೊಂಡರೆ...ಅವನ ಸ್ನೇಹಿತರು ಜೋತೆಗಿರಬೇಕು ಎನ್ನುವುದು ಸಮರ್ಪಕವಾದ ಉತ್ತರ..ವ್ಯಕ್ತಿಯ ಜೀವನದ ಪ್ರತಿ ಘಟ್ಟದಲ್ಲು ಸ್ನೇಹಿತರಿರುತ್ತಾರೆಸ್ನೇಹಿತರೆಂದರೆ ಯಾರು?ಸ್ನೇಹಿತರೆಂದರೆ ಸ್ನೇಹ ಭಾವ ಉಳ್ಳವರು.ಯಾರು ಬೇಕಾದರೂ ಆಗಬಹುದು.ತಂದೆ-ತಾಯಿ, ಬಂಧು-ಬಳಗ.ನೆರೆ- ಹೊರೆ ಹೀಗೆ....ಹೆಚ್ಚಾಗಿ ಸಮವಯಸ್ಕರು.ಸಹಪಾಠಿಗಳು, ಜೋತೆಯಲ್ಲಿ ಕೆಲಸಮಾಡುವವರು ಸ್ನೇಹಿತರಾಗುತ್ತಾರೆ.ಇನ್ನೂ ಕೆಲವಕ್ಕೆ ಎಲ್ಲೊ ನೋಡಿದ,ನೋಡದೆ ಮಾತಾಡಿದ ವ್ಯಕ್ತಿಗಳ ನಡುವೆ ಗಾಢ ಸ್ನೇಹವಾಗುವುದುಂಟು.ಇಂಥ ಅನೇಕ ಉದಾಹರಣೆಗಳು ನಡೆದಿವೆ. ವಿಚಿತ್ರ. ಎಂದರೆ ರಾತ್ರಿ ಕನಸಿನಲ್ಲಿ ಕಂಡ ವ್ಯಕ್ತಿ ನಿಜ ಜೀವನದಲ್ಲಿ ಆಪ್ತ ಸ್ನೇಹಿತ.!!ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತದ್ದೆ ಅಲ್ಲಿ ಅನೇಕರು ನನ್ನ ಸ್ನೇಹಿತರು.ಅದರೆ ಅವರು ನನ್ನ ಗೆಳೆಯರು ಎಂಬ ಭಾವನೆ ಬಂದಿದ್ದು ಹೈಸ್ಕೂಲು ಸೇರಿ  ತಿಂಗಳಾದ ಮೇಲೆನೆ.ಸ್ನೇಹ ಆಳವಾಗಲು ಸ್ನೇಹಿತರ ದರ್ಶನದ ನಡುವೆ ಅಂತರವಿರಬೇಕು.ಆ ಅಂತರ ಹೆಚ್ಚಾದರೂ ತೊಂದರೆಯೇ..ಎನೇ ಆಗಲಿ ನಮ್ಮ ನಡೆ-ನುಡಿಗಳಿಂದಲೆ ಸ್ನೇಹ ಹಬ್ಬುವುದು,ಗೆಳೆತನ ಉಳಿಯವುದು.ವಿದಾಯಕ್ಕೆ ವಿದಾಯ ಹೇಳೊಣ...🙏                                     ಸಂದೇಶ ಪೂಜಾರಿ ಗುಲ್ವಾಡಿ

Friday, 7 October 2016

ವ್ಯರ್ಥಛಲ

ವ್ಯರ್ಥಛಲ



ಆತ ಬಹಳ ಮಹತ್ವಾಕಾಂಕ್ಷಿ, ಏನನ್ನಾದರೂ ಸಾಧಿಸಲೇ ಬೇಕೆಂಬ ಮುಂಗೋಪಿ.ಆತ ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಒಮ್ಮೊಮ್ಮೆ ತನ್ನ ಅಂತರ್ಯದ ನಿಜ ರೂಪ ತೋರಿಸುತ್ತಾನೆ.ಒಮ್ಮೊಮ್ಮೆ ನಾನು ಆತನನ್ನು ಸಮರ್ಥಿಸುತ್ತೆನೆ ಮನದೊಳಗೆ ದ್ವೇಷಿಸುತ್ತೆನೆ.
ತಾನು ಗೆದ್ದೆ ಗೆಲ್ಲುವೆ ಎಂಬ ಆತ್ಮವಿಶ್ವಾಸದ ಛಲದಿಂದ ತನ್ನ ಮನದನ್ನೆಗೆ ಮಾತನಿಟ್ಟು ತನ್ನ ಕಾರ್ಯತತ್ಪರತೆಗೆ ಮುಂದಾಗುತ್ತಾನೆ.
ಮುಂದಿನ ಹಾದಿಯಲ್ಲಿ  ಸಾಕಷ್ಟು  ಎಡರು ತೊಡರುಗಳನ್ನು ಅನುಭವಿಸುತ್ತ ಸಾಗುತ್ತಾನೆ. ಅಲ್ಲಿ ಅವನಿಗೆ ಸಹಾಯದ ಒಂದು ಎಳೆ ಹಬ್ಬಿರುದರಿಂದ ತನ್ನ ಜೀವನದಲ್ಲಿ ಅಷ್ಟೇನು ಯೋಚಿಸುವುದಿಲ್ಲ.

ಕಾಲನ ನರ್ತನಕೆ ಮಿತಿ ಉಂಟೆ..?
ಆತ ಆರಿಸಿಕೊಂಡ ವಿಷಯ ಸಧ್ಯಕ್ಕಂತು ಕಠಿಣ.ಅದರೆ ಅವನಿಗೊಂದು ಆತ್ಮವಿಶ್ವಾಸ ತನ್ನಂತೆ ದುಡಿವರಿಗಿಂತ ತಾ ಮುಂದಿದ್ದೆ. 

ಒಂದು ದಿನ,ಆ ದಿನ, ಸುದಿನ,ಶುಭದಿನ. ತನ್ನ ಕನಸುಗಳನ್ನೆಲ್ಲ ತನ್ನ ಸುತ್ತ ಹರಡಿಕೊಂಡು ತಾನೊಬ್ಬನೇ ಮಧ್ಯದಲ್ಲಿದ್ದುಕೊಂಡು ಒಂಟಿಯಾಗಿ ಆ ಪಾತ್ರಗಳಿಗೆ ತನ್ನನ್ನು ಹಚ್ಚುತ್ತಾನೆ,ಕುಣಿಯುತ್ತಾನೆ,ಕುಪ್ಪಳಿಸುತ್ತಾನೆ,ಆನಂದಿಸುತ್ತಾನೆ.

ಸಂಜೆಯ ವೇಳೆ ಆಗುತ್ತಿದ್ದಂತೆ ಭ್ರಮೆಯ ಲೋಕದಿಂದ ಮರಳಿ ಕನಸುಗಳನ್ನೆಲ್ಲ ಕರಗಿಸಿ ಬಳಿಯಲ್ಲಿರುವ ಚಿನ್ನದ ಚೌಕಟ್ಟಿನ. ಕನ್ನಡಿಗರ ಬಣ್ಣವಾಗಿ  ಬಳಿಯುತ್ತಾನೆ.ಅಲ್ಪ ಸಮಯದಲ್ಲೇ ತುಳಿತಕ್ಕೊಳಗಾಗಿ ಗಾಜು ಪುಡಿಗಟ್ಟುವುದು ಎಂಬ ಯೋಚನೆಯೆ ಇಲ್ಲ...

ಅವನು ನನಗನಿಸಿದ ಹಾಗೆ ಯಾವ ದೊಡ್ಡ ತಪ್ಪುಗಳನ್ನು  ಮಾಡಿದವನಲ್ಲ,ಅದರೆ ಅದೇಕೊ.ಆತ ಮಾಡಿದಿಷ್ಟೆ ಪ್ರಥ್ವಿಯಲ್ಲಿ ಒಂದು ದೊಡ್ಡ ಹೆಜ್ಜೆ ಊರಿದ್ದು.
ಜನ ಅವನಿಗೆ ಎದುರಾಡುವುದಿಲ್ಲ ಅವನು ಮಾಡಿದ್ದೆ ಸರಿ ಅನ್ನುವ ರೀತಿ,ಆದ್ದರಿಂದಲೇ  ಅಲ್ಪ ಜಂಭ.
ಯಾವ ವಿಷಯಕ್ಕಾದರು ದುಡುಕಿ ಹೊಂದಾಣಿಕೆ ಮಾಡಿಕೊಳ್ಳದ ಅವನು ತನ್ನ ಆತ್ಮೀಯ ಗೆಳೆಯನಾದರೂ,ಅಲ್ಲಾ ಎಂದುಕೊಂಡೆ ಹೊಂದಿಕೊಂಡಿದ್ದ.
ಅಲ್ಪವಧಿಯಲ್ಲಿ ವಿಶಾಲತೆಯನ್ನು ಸಾಧಿಸ ಹೊರಟ ಅವನ ಮನದಲ್ಲಿ ಯೋಜನೆಯ ಯೋಚನಾಲಹರಿ ಹೆಣೆಯಲ್ಪಟ್ಟಿತು.
ಸದಾ ಅವಳ ಉಸಿರಲ್ಲಿ ಬದುಕುತಿದ್ದ ಅವನಿಗೆ ಸಧ್ಯ ಉಸಿರುಗಟ್ಟಿದಂತಾಗಿದೆ.ಅವನವಳ ಮಧ್ಯದಲ್ಲಿ ಪರಾಕೀಯರ ಪ್ರವೇಶ ಇದಕ್ಕೆಲ್ಲಾ ಕಾರಣವಾಗಿತ್ತು.ಏಕಮುಖ ಒಲವು ಇನ್ನೊಂದು  ಕಾರಣವಾಗಿರಬಹುದು.ಇತ್ತೀಚಿನ ಈ ಪ್ರಕ್ರಿಯೆ ಅವನಲ್ಲಿ ಆಳ ನಿರಾಸೆಯನ್ನುಂಟುಮಾಡಿ ಜಿಗುಪ್ಸೆಗೆ ಒಳದೂಡಿತ್ತು.

ಪ್ರೀತಿಯ ಕುಲುಮೆಯೆಂದು ಎಷ್ಟು ಬೇಯಲು ಸಾಧ್ಯ.? ಮತ್ತೆ ಚೇತರಿಸಿಕೊಂಡ ಅವನಿಗೆ ಸಂಗಾತಿಯೊಬ್ಬಳು ಸಿಕ್ಕಳು. ಖುಷಿಯಲಿ ತನ್ನ ನೋವನ್ನೆಲ್ಲ ಮರೆತ ಜೊತೆಗೆ ಮೂಲವನ್ನೆ ಮರೆತ.
ಇನ್ನುಳಿದಿದ್ದು ಅವಳನ್ನು  ಉಳಿಸಿಕೊಳ್ಳುವ ಛಲ,ಈ ಹಂತದಲ್ಲಿ ಅವನ ಕೋಪ, ಸ್ವಾಭಿಮಾನ,ಗಾಂಭೀರ್ಯವನ್ನೆ ಮರೆತ. 

ಅತ್ತಿತ್ತ ಸುತ್ತಾಡಿ ಎರಡು ಕಡೆಯಿಂದ ಒಂದಷ್ಟು ಅನುಭವ ಗಳಿಸಿಕೊಂಡ.ಜೀವನ ತುಂಬ ಪಾಠ ಕಲಿಸಿತ್ತು.

ಗಾಯದಮೇಲೆ ಬರೆ
ಜೀವನ ಅವನಂದುಕೊಂಡಂತೆ ಇರಲಿಲ್ಲ .ಇಲ್ಲಿ ಕಾಯುವ ತಾಳ್ಮೆ ಯಾರಿಗು ಇರಲಿಲ್ಲ.ತನ್ನ ಬದುಕಿಗಿಂತ ಇತರರ ಬಾಳು ದೊಡ್ಡದೇನಲ್ಲಾ..ತಾನು ತನ್ನನ್ನೇ ಪ್ರೀತಿಸುವುದರಲ್ಲಿ ತಪ್ಪೇನಿಲ್ಲ.
ಎಲ್ಲಾ ಕಳೆದುಕೊಂಡ ಅವನಿಗೆ ಕೊನೆಗೆ  ಪ್ರೀತಿಯು ಮೋಸಮಾಡಿತ್ತು.ಇನ್ನುಳಿದ ಬದುಕಲ್ಲಿ ಮೋಸಗೊಂಡ ಅವನಿಗೆ ಮೋಸಮಾಡುವುದೊಂದೆ ಗುರಿ ಅನ್ನುವ ಹಾಗೆ ಇದ್ದಂತಿತ್ತು.
ಎಲ್ಲರ ಹಿತನುಡಿಗಳು ಅವನಿಗೆ ಕೇಳಿಸದಷ್ಟು ಬೆಳೆದು ನಿಂತ. ನನ್ನವನೆಂಬ ವಾತ್ಸಲ್ಯದಿಂದ ನನ್ನ ಮನ ಕಳವಳಗೊಂಡಿತು.
ಒಳ್ಳೆಯತನದ ಉಳಿವಿಗಾಗಿ ನಾನು ಹೋರಾಡಲೇ ಬೇಕು,ಅವನ ಮನಸ್ಸನ್ನು ಕೊಲ್ಲುವುದು ಅನಿವಾರ್ಯವಾಗಿತ್ತು.ಇದು ಅವನ ಬದುಕನ್ನೆ ನಾಶಮಾಡಿತ್ತು.ಸತ್ತಂತೆ ಬದುಕಿದ್ದ ಆತ.

ಮನುಷ್ಯನಿಗೆ ಸ್ವಾರ್ಥ ಜನ್ಮಸಿದ್ಧ ಹಕ್ಕಿರಬೇಕು,ನನ್ನ ನೆಮ್ಮದಿಗೊಸ್ಕರ ಎಲ್ಲಾ(ಎಲ್ಲರೂ) ಮರೆತ ಆತನ ನಾನು ಮರೆತೆ.
ಲೋಕ ಶಾಂತಗೊಂಡಿದೆ ಆದರೆ ಪ್ರಪಾತ ಹಾಗೇ ಇದೆ.......

------ಸಂದೇಶ ಪೂಜಾರಿ ಗುಲ್ವಾಡಿ

2.ಎಪ್ರಿಲ್ ಪೂಲ್

                         2.ಎಪ್ರಿಲ್ ಪೂಲ್



 ನನಗೂ ಅಣ್ಣನಿಗು ಹತ್ತು ವರ್ಷ ವ್ಯತ್ಯಾಸ. ಅಣ್ಣನು ಅಮೆರಿಕದಲ್ಲಿ ಸ್ವಾಪ್ಟವೇರ್ ಕಂಪನಿಯಲ್ಲಿ ಉದ್ಯೋಗ. ಮನೆಯವರೆಲ್ಲರನ್ನು ತುಂಬ ಕಾಯಿಸಿ ಹುಟ್ಟಿದವನು ನಾನು.ಅದಕ್ಕೆ ಏನೋ ಎಲ್ಲರಿಗು ನಾನೆಂದರೆ ತುಂಬ ಪ್ರೀತಿ.
ಅಣ್ಣನಂತು ನನ್ನ ಪ್ರೀತಿಯಿಂದ ಸ್ಯಾಂಡಿ ಅಂತನೆ ಕರೆಯುತ್ತಿದ.
ಇಂದು ಎಲ್ಲಿಲ್ಲದ ಖಷಿಯಲ್ಲಿದ್ದೆ,ನಾಳೆ ಎಪ್ರಿಲ್ ಎರಡು ನಾನು ಹುಟ್ಟಿದ ದಿನ.
ಅಣ್ಣ ಏಕೆ ಇಷ್ಟೊತ್ತಾದರು ಬಂದಿಲ್ಲ.

ಬಸ್ ಸ್ಟಾಂಡ ಸೈಡಲ್ಲಿಒಂದು ಗುಂಪು ಮಾತಾಡಿಕೊಳ್ಳುತ್ತಿತ್ತು.ಪಾಪಾ.... ಈಗಷ್ಟೆ ಬಂದಿಳಿದ ..ಅವನ ಅದ್ರಷ್ಟ. ಚೆನ್ನಾಗಿರ್ಲಿಲ್ಲಾ.ಚೇ ...
ಯಾರೋ ಸ್ಯಾಂಡಿ  ಅಂತೆ..

ಸ್ಯಾಂಡಿ ಹೆಸರು ಕೇಳಿದ ತಕ್ಷಣ ನನಗರಿವಿಲ್ಲದೆ ತಿರುಗಿದೆ.ಗುಂಪು ಚದುರಿ ಕೆಂಪು ಕಲೆ ಮಾತ್ರ ಇತ್ತು.

ಸೆಕೆಂಡಿನ ಮುಳ್ಳು ಜೋರಾಗಿ ತಿರುಗುತಿತ್ತು ಆಗಾಗಲೇ ಹನ್ನೆರಡು..
ನಾಲ್ಕು ವರ್ಷದ ಹಿಂದೊಮ್ಮೆ ಹೀಗೆ ಮಾಡಿದ್ದ.ಅವನು ಹೇಳಿದ ಹಾಗೆ ಒಂಭತ್ತನೆ ಕ್ಲಾಸ್ ಅಲ್ಲಿ ಪಸ್ಟ ಕ್ಲಾಸ್ ಬಂದು ಅಯ್ತು.
ಸರಿಯಾಗಿ ನೆನಪಿದೆ,ಇದೆ ದಿನ ಇದೆ ಬಸ್ ಸ್ಟಾಪ್ ನಲ್ಲಿ ಎಂಟು ಗಂಟೆ ಕಾದಿದ್ದೆ.ಸುಸ್ತಾಗಿ ಬಂದ ನನ್ನ ಅಮ್ಮನ ನಗು ಸ್ವಾಗತಿಸಿತು.
ಪೋನ್ ಕೈಗಿಟ್ಟು ಅಣ್ಣ ಎಂದು ಸನ್ನೆ ಮಾಡಿದಳು.ಆ ಕಡೆಯಿಂದ ಎಪ್ರಿಲ್ ಪೂಲ್  ಎಂದ ಧ್ವನಿ ನನ್ನ  ಸಿಟ್ಟನ್ನು ತಾರಕಕ್ಕೆ ಏರಿಸಿತು.
ಎಂಥ ಮನುಷ್ಯನಪ್ಪ ಎಂದು ಒಂದು ವಾರ ಮಾತು ಬಿಟ್ಟಿದ್ದೆ.
ಸಂಜೆ ನಾಲ್ಕುವರೆ ಆಯ್ತು.ಅಪರೂಪದ ಮಳೆ ಬೇರೆ..
ನನಗರಿವಾಯ್ತು ಅಣ್ಣ ಇನ್ನು ಮಕ್ಕಳ ಬುದ್ದಿ ಬಿಟ್ಟಿಲ್ಲಾ..ಪುನ ಅದೆ  ಎಪ್ರಿಲ್ ಪೂಲ್ ಎಂಬ ನಿರಾಸೆಯಿಂದ ಮನೆಕಡೆ ಹೆಜ್ಜೆ ಹಾಕಿದೆ
                                   ಸಂದೇಶ ಪೂಜಾರಿ ಗುಲ್ವಾಡಿ

Thursday, 6 October 2016

ಕಿಡಿಗೇಡಿಗಳಾಗಿದ್ದ ದಿನಗಳು

ನಾನು ಆರನೇ ಕ್ಲಾಸ್ ನಲ್ಲಿ ಓದುತಿದ್ದೆ.ನಮ್ಮ ಮನೆ ಪಕ್ಕದಲ್ಲಿ ಹೊಳೆ ಹರಿಯುತ್ತಿತ್ತು,ಈಜಿ ದಡ ಸೇರಿದರೆ ತಿನ್ನಲು ಬೇಕಾದಷ್ಟು ಕಬ್ಬು,ಹಣ್ಣುಗಳು ಏನೇನೊ ಸಿಗುತ್ತಿದ್ದವು.ಆ ದಿನ ನನ್ನ ಗ್ಯಾಂಗ್ ಬಿಟ್ಟು  ಒಬ್ಬನೆ ಹೊರಟಿದ್ದೆ.ಇರುವುದೊಂದೇ ಡ್ರೆಸ್ ಆದ್ರಿಂದ ಬಟ್ಟೆಯನ್ನೆಲ್ಲಾ ಗುಂಡಾಗಿ ಕಟ್ಟಿ ಮರಕ್ಕೆ ನೇತು ಹಾಕಿ ಆಚೆ ದಡ ಸೇರಿದೆ.ಕಬ್ಬು ಮುರಿಯುದರಲ್ಲಿದ್ದೆ..ಟಕ್ .. ಸೌಂಡಿಗೆ ಬಾರ್ಗೊಲು ಹಿಡಿದು ಬಂದ ಬಾಬಣ್ಣ, ಬರಿ ಮೈಗೆ ಬಾಸುಂಡೆ ಬರಿಸಿ ಬನ್ನೆರಳ ಮರಕ್ಕೆ ಕಟ್ಟಿ ಹಾಕಿದ್ರು. ಸಂಜೆ ಮಾವ ಬರೊ ತನಕ ಬಿಟ್ಟಿರಲಿಲ್ಲಾ. ಕೆಂಪಿರುವೆ ನನ್ನ ಕೆಂಪಗೆ ಮಾಡಿತ್ತು...
ಸಂಜೆ  ಐದಾಗಿದ್ರಿಂದ ಕ್ಲಾಸ್ ಮೇಟ್ ನನ್ನ ನಗ್ನ ಸ್ಥಿತಿ ನೋಡಿ ನಕ್ಕು ಹೋಗಿದ್ರು.ಅವರಲ್ಲಿ ಹುಡುಗಿಯರೇ ಜಾಸ್ತಿ ಅಬ್ಬಾ ಎಂತಹ ಅವಮಾನ...
ಅದ್ಯಾಕೊ ಅವರಲ್ಲಿ ತುಂಬ ಹಣವಿತ್ತು.ಇರೋದು ಇಬ್ರೆ ಗಂಡ ಹೆಂಡತಿ. ಹೆಂಡ್ತಿಗೆ ಬೇರೆ ಎನೊ ಕಾಯಿಲೆಯಂತೆ ಯಾಕಪ್ಪಾ ಅವರಿಗೆ ಅಷ್ಟೊಂದು ಹಣ...
ಪ್ರತೀಕಾರ ತೋರಿಸಲು ಅದೆಷ‍್ಟೊ ಬಾರಿ ಪ್ರಯತ್ನಿಸಿದೆ.ಹಂದಿ ಉರಳು ಅವರಿಗಿಟ್ಟಾಗಲು ಸಿಕ್ಕಿ ಹಾಕಿ ಕೊಂಡಿರಲಿಲ್ಲಾ.ನಡೆವ ದಾರಿಯಲ್ಲಿ ಗುಂಡಿ ತೋಡಿ ತರಗೆಲೆ ಮಚ್ಚಿದೆ,ಅವರು ಗೇರು ಸಸಿ ತಂದು ನೆಟ್ಟರು,ಅದೀಗ ಹೂವು ಬಿಟ್ಟದೆ.
ಒಂದು ದಿನ ಬಾಬಣ್ಣನಿಗೆ ಮದುವೆ ಕರಯೋಲೆ ಪೋಸ್ಟ್  ಮೂಲಕ ಬಂದಿತ್ತು. ನಾನೆ ಓದಿ ವಾರ ಬದಲಾಯಿಸಿ ಅವರಿಗೆ ಕೊಟ್ಟಿದ್ದೆ. ಅವರು ಮದುವೆಗೆ ಹೋಗುವ ವೇಳೆ ಭಯಂಕರ ಸ್ಕೆಚ್  ಹಾಕಿದ್ದೆ.ಸ್ಕೆಚ್ ಹಾಕಲು 40 ಪೇಜ್ ಬುಕ್ ಖಾಲಿಯಾಗಿತ್ತು.
ನನ್ನ ಗ್ಯಾಂಗ್ ಕಟ್ಟಿಕೊಂಡು ಬಾಳೆದಿಂಡಿನ ತೆಪ್ಪದಲ್ಲಿ ಹೊಳೆ ದಾಟಿಸಿದೆ.ಮನೆಯಿಡಿ ದ್ವಂಸ ಮಾಡಿದೆವು,ಇದ್ದ ಪೆಟ್ಟಿಗೆಗಳು,ಹಣ ಎಲ್ಲವನ್ನು ಹೊತ್ತುಕೊಂಡು ಬಂದೆವು.ಬರುವಾಗ ಹೊಳೆ ತನ್ನ ಪಾಲು ದಕ್ಕಿಸಿಕೊಂಡಿತು.    
ಸಂಜೆ ಬಾಬಣ್ಣನ ಹೆಂಡತಿ ಸಿರಿಯಸ್ ಎನ್ನುವ ಸುದ್ದಿ ಇನ್ನಷ್ಟು ಖುಷಿ ಕೊಟ್ಟಿತು.
ಒಂದು ವಾರ ಕಳೆದು ರಾಯಚೂರಿಗೆ ನಮ್ಮ ಮನೆ ಬದಲಾಯಿಸಲಾಗಿತ್ತು.
ಪೆಟ್ಟಿಗೆ ತೆರೆದ ನಾ  ಮಾತ್ರೆ.,ಚೀಟಿ.ಪುಸ್ತಕ ನೋಡಿ ಮೂಲೆಗೆ ಎಸೆದೆ.
ಇಂದು ನಾ ಡಾಕ್ಟರ್  ಆಗಿರೊಕೆ
ಬಾಬಣ್ಣನ ದಿನಚರಿ ಪುಸ್ತಕವೇ ಕಾರಣ.ಕಣ್ಣಿರನ್ನೆ ಅದ್ದಿ ಬರೆದ ಪುಸ್ತಕ ಅದು.ಹೆಂಡತಿಯ ಕ್ಯಾನ್ಸರ್ ಗುಣಪಡಿಸಲು ಅವರು ಪರಿತಪಿಸಿದ ಪರಿ,ಸಂಗ್ರಹಿಸುತ್ತಿದ್ದ ಹಣ,ಮಕ್ಕಳಿಲ್ಲದಿದ್ದರು ಪರವಾಗಿಲ್ಲಾ ಅನ್ನೊ ನೋವು,ಬೇರೆ ಮದುವೆಯಾಗದ ಅವರ ಉದಾತ್ತ ಜೀವನ ಹೀಗೆ ಎಲ್ಲವು ಇಂಚಿಂಚು ದಾಖಲಾಗಿತ್ತು.ಕಣ್ಣಂಚು ತುಂಬಿಬಂತು.ಪಶ್ಚಾತ್ತಾಪ ಪಟ್ಟ ನನಗೆ ಅವರಿಬ್ಬರನ್ನು ಹುಡುಕಿ ಕ್ಷಮೆ ಕೇಳುವುದು ಸಾಧ್ಯವಿಲ್ಲ ಎಂದು ಮನದಟ್ಟಾಯಿತು...

      ಸಂದೇಶ ಪೂಜಾರಿ ಗುಲ್ವಾಡಿ

ಪ್ರೇಮ ಪತ್ರ..ಇಲ್ಲಾ ತಾಪತ್ರ....

ಹಾಯ್ ಚಿನ್ನು.....
ನಿನ್ನ ತುಂಬಾ ಮಿಸ್ ಮಾಡ್ಕೊಳ್ತಿನಿ ಕಾಣೆ....ನಿಂಗೆ ತುಂಬಾ ಕೋಪ ಇದೆ ನಂಗೊತ್ತು..ಇದೆಲ್ಲಾ ಸ್ವಲ್ಪ ದಿನ ಮಾತ್ರ ..ಪ್ಲೀಸ್ ಅಡ್ಜಸ್ಟ ಮಾಡ್ಕೋ..
ಅಂದಹಾಗೆ ಯಾವಾಗ್ಲು ಹೇಳ್ತಿರ್ತಿಯಲ್ಲ ನಿಮಗೆ  ಫೀಲಿಂಗೆ ಇಲ್ಲ.ಮನಸ್ಸೆ ಇಲ್ಲ,ನಾನಿಲ್ಲ ಅಂದ್ರು ಖುಷಿಯಾಗಿರ್ತಿರಿ..ಅಂತ..
ಹಾಗೆ  ಹೇಳಲೆ ಬೇಡಾ..
ಕಣ್ಣಲ್ಲೆ ನೀರ್ ಬಂದ್ಬಿಡುತ್ತೆ ಕಾಣೊ.
ನಿಂದೆನ್ ತಪ್ಪಿಲ್ಲ ಬಿಡೊ..ಆದ್ರೆ..ಇಲ್ಲಿ ನಿನ್ನ ನೆನಪಿಲ್ಲದೆ ಒಂದ್ ಕ್ಷಣನೂ ಬದುಕೊಕಾಗಲ್ಲಾ ಅನ್ಸುತ್ತೆ...
ಮೊದಮೊದಲು  ನಂಗೆ ಉಸಿರು ಕಟ್ಟಿದಂತಾಗ್ತಿತ್ತು..ಮೂಕನಾಗ್ಬಿಟ್ಟಿದ್ದೆ.ಆದ್ರೆ... ಹಗಲು ರಾತ್ರಿ ನಿನ್ನ ನೆನಪನ್ನೆ ಹೊತ್ತು ತಂದು ಕಿವಿ ಹಿಂಡುವ ಈ ತಂಗಾಳಿ ಜೋತೆ ತುಸು ದೂರ ನಡಿಬೇಕು ಅನ್ಸುತ್ತೆ. ಅರಳಿ ನಿಂತು ಮುಖ ತಿರಗಿಕೊಂಡ ಈ ಹೂವನ್ನ ಕಂಡಗಾ...ನಿನ್ನ ಗುಳಿ ಕನ್ನೆನೆ ನೆನಪಾಗುತ್ತೆ..
ಇನ್ ಮೂರ್ ತಿಂಗಳು ಈ ಮಳೆ ಹನಿಯಲ್ಲಿ ನಿನ್ ಸ್ಪರ್ಶನೆ ಸವಿಬಹುದು..
ನಿದ್ದೆಯಲ್ಲೂ ಈ ಮುದ್ದು ಮುಖನ ನೋಡೊ ನಂಗೆ ..ನೀನ್ ಹೇಗ್ ಹೇಳ್ತಿಯ ನೆನಪಾಗಲ್ಲ್ ಅಂತ.
ಇತ್ತೀಚೆಗೆ  ನಾನ್ ಮನೆಗೆ ಹೋಗೊದೆ ಬಿಟ್ಟಿದ್ಟೆ.. ಈ ಗಾರ್ಡನೆ ನೆನಪಿನ ಅರಮನೆಯಾಗ್ಬಿಟ್ಟಿದೆ..
ಅಯ್ಯೊ..ಬೇಜರಾಗ್ಬೇಡ ಕಾಣೆ..ಇಲ್ಲೆನ್ ನಾನ್ ಟೆಂಟ್ ಹಾಕಲ್ಲ್.. .ಬರ್ತಿನಿ...
       
    ಕಾದಿರು ನಲ್ಲೆ
            ನನ್ನ ನೆನಪಲ್ಲೆ
                    ನಿನ್ನ ಒಲವಲ್ಲೆ
                                    ನಿನ್ನವ

                             ಸಂದೇಶ ಪೂಜಾರಿ ಗುಲ್ವಾಡಿ